ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಹುಬ್ಬಳ್ಳಿಯ KIMS ನಿರ್ದೇಶಕರಾದ ಡಾ|| ಈಶ್ವರ ಹೊಸಮನಿ ರವರ ಬೆಟ್ಟಿ.
Date : 17-07-2025
ದಿನಾಂಕ:-17.07.2025 ರಂದು ಬೆಳಿಗ್ಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಹುಬ್ಬಳ್ಳಿಯ KIMS ನಿದೇರ್ಶಕರಾದ ಡಾ|| ಈಶ್ವರ ಹೊಸಮನಿ ಇವರು ಕುಟುಂಬ ಸಮೇತರಾಗಿ ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಗಣ್ಯರನ್ನು ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ KIMS ನಿದೇರ್ಶಕರಾದ ಡಾ|| ಈಶ್ವರ ಹೊಸಮನಿರವರು ಸಿದ್ಧಾರೂಢಮಠದ ಆವರಣದಲ್ಲಿ ಒಂದು ವಿಶೇಷವಾದ ಆಫ್ರಿಕಾ ಮೂಲದ ಬೌಬ್ಯಾಬ್ (Baobab tree) (Adansonia digital) ಸಸಿಯನ್ನು ನೆಟ್ಟು ವನಮಹೋತಸ್ವವನ್ನು ಆಚರಿಸಿದರು. ಈ ಬೌಬ್ಯಾಬ್ ಮರವು ಅತ್ಯಂತ ವಿಶೇಷವಾಗಿದ್ದು ಇದು ಸುಮಾರು ಐದು ಸಾವಿರ ವರ್ಷಗಳವರೆಗೆ ಬದುಕಬಲ್ಲಂತಹ ಪವಿತ್ರವಾದ ಮರವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್ ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಸರ್ವಮಂಗಳಾ ನಾ. ಪಾಠಕ, ಶ್ರೀ ವಿ. ವಿ ಮಲ್ಲಾಪೂರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.